ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Saturday, January 28, 2017

ಮಕ್ಕಳನ್ನು ಯಂತ್ರಗಳನಾನ್ನಗಿಸುವ ವ್ಯವಸ್ಥೆ - ವಿವೇಕ ಬೆಟ್ಕುಳಿ,



ಹುಟ್ಟಿದಾಗ ಅಳುವ, ಆ ನಂತರದಲ್ಲಿ ಹಸಿವಾದಾಗ, ನೋವಾದಾಗ ಅಳುತ್ತಾ, ತನ್ನಷ್ಟಕ್ಕೆ ನಗುತ್ತಾ ಬೆಳೆಯುವ ಮಗು ತೊದಲು ಮಾತನಾಡಿದಾಗ...ಅಮ್ಮ, ಅಪ್ಪ...ಅಣ್ಣ  ಏನೇ ಹೇಳಿದರು ಮನೆ ಮಂದಿಯೆಲ್ಲಾ ಸಂತೋಷದಿಂದ ಆ ಮಗುವಿನ ಸಹಜತೆಯಿಂದ ಆಕಷಿ೯ತರಾಗುವರು. ಯಾವುದೇ ಹುದ್ದೆ, ಅಂತಸ್ತು ಯಾವುದೂ ಸಹಾ ಆ ಮಗುವಿಕೆ ತಿಳಿದರುವುದಿಲ್ಲ, ಮಗುವಿನ ಜನನ ಅದರ ಆಕರ್ಷಣೆಯಿಂದಾಗಿ ಮಗುವಿನ ತಾಯಿ ಸಹಾ ನಿಧಾನವಾಗಿ ಗೌರವಕ್ಕೆ ಅರ್ಹಳಾಗುವಳು. ಇಂತಹ ಮುಗ್ದ ಮನಸ್ಸಿನ ಮಕ್ಕಳು ಚಿಕ್ಕ ಪುಟ್ಟ ಹೆಜ್ಜೆಯನ್ನು ಇಡುತ್ತಾ ಮನೆಯೆಲ್ಲಾ ಓಡಾಡುವುದು. ಅದಕ್ಕೊಂದು ಹೆಸರು, ಜಾತಿ ನೀಡಿ ಯಾವಾಗ ನಾವು ಪ್ರತೇಕ ಗುರುತಿಸುವಿಕೆ ಪ್ರಾರಂಭ ಮಾಡುವೆವು. ಅಂದಿನಿಂದ ಮಕ್ಕಳು ತಮ್ಮತನವನ್ನು ಕಳೆದುಕೊಳ್ಳತೊಡಗುವರು. ಸಹಜವಾಗಿ ಇರುವ ಮಗುವಿಗೆ ಮನೆಯ ಅಂತಸ್ತು, ಅಪ್ಪ ಅಮ್ಮನ ಗೌರವ ಜಾತಿ, ಧರ್ಮದ ರೀತಿ ಈ ಎಲ್ಲವನ್ನು ಆ ಮಗುವಿನ ನಡುವಳಿಕೆ, ಆಹಾರ ವೇಷ ಭೂಷಣದಲ್ಲಿ ಒತ್ತಾಯವಾಗಿ ತುರುಕಲು ಪ್ರಾರಂಭಿಸುವೆವು. ಅದರ ಮುಂದುವರೆದ ಭಾಗವಾಗಿಯೇ ಶಾಲೆಗಳು ಸೃಷ್ಠಿಯಾಗಿರುವುದು. ಯಾವಾಗ ಮಗು ಶಾಲೆಗೆ ಹೋಗಲು ಪ್ರಾರಂಭ ಮಾಡುವುದೋ ಅಂದಿನಿಂದ ಮಗು ಯಾಂತ್ರಿಕ ಮಗುವಾಗಿರುವುದು, ವಿನಹ: ಸಹಜ ಮಗುವಾಗಿರದು. ಸಹಜ ಮಗುವನ್ನು ಯಾಂತ್ರಿಕ ಮಗುವನ್ನಾಗಿಸುವಲ್ಲಿ ಮುಖ್ಯವಾಗಿ ತಾಯಿ, ತಂದೆ ಹಾಗೂ ಶಾಲಾ ಶಿಕ್ಷಕರ ಪಾತ್ರ ಬಹುಮುಖ್ಯವಾಗಿರುವುದು. ಸ್ವಲ್ಪ ಸಹಜತೆ ಬಗ್ಗೆ ಮಾತನಾಡುವ ಅಜ್ಜ, ಅಜ್ಜಿ ಕಡೆ ಸಹಜವಾಗಿ ಮಗು ಆಕಷಿ೯ತವಾಗುವುದು. ಆದರೇ ಇಂದಿನ ಆದುನಿಕ ಯುಗದಲ್ಲಿ ವಯಸ್ಸಾದವರನ್ನು ವೃದ್ದಾಶ್ರಮದಲ್ಲಿ ಇಡುವ ವ್ಯವಸ್ಥೆ ಪ್ರಾರಂಭವಾಗಿರುವುದರಿಂದ ಮಗುವಿನ ಬಗ್ಗೆ, ಅದರ ಸ್ವಾತಂತ್ಯದ ಬಗ್ಗೆ ಮಾತನಾಡುವ ಯಾರು ಸಹಾ ಅದರ ಜೊತೆ ಇಲ್ಲದಂತೆ ಆಗಿರುವುದು. ಇಂತಹ ಸನ್ನಿವೇಶದಲ್ಲಿ ಖಾಸಗಿ ಶಾಲೆಗೆ ಹೋಗುವುದು, ಇಂಗ್ಲೀಷ ಮಾತನಾಡುವುದು, ಉತ್ತಮವಾದ ವೇಷ ಭೂಷಣ ಧರಿಸಿ ಬೇರೆ ಬೇರೆ ಭಾಷೆಯಲ್ಲಿ ಮಾತನಾಡುವುದು. ಒಟ್ಟಾರೆ ಎಲ್ಲರಕ್ಕಿಂತ ಮುಂದೆ ಬಂದು ಶಾಲೆಯಲ್ಲಿ ಉತ್ತಮ ವಿದ್ಯಾಥಿ೯ ಅನಿಸಿಕೊಳ್ಳುವುದೇ ಮಕ್ಕಳ ಮುಖ್ಯ ಕತ್ಯರ್ವವಾಗಿರುವುದು.


ಈ ಎಲ್ಲ ರೀತಿಯ ಪ್ರಯಾಣವನ್ನು ಮುಗಿಸಿ 15 ವರ್ಷಕ್ಕೆ ಕಾಲಿರಿಸದ ಮಕ್ಕಳು. ಯಂತ್ರಗಳಾಗಿರುವರು. ಭಾವನೆಗಳಿಗೆ ಬೆಲೆ ಇಲ್ಲದೆ, ತಪ್ಪು ಸರಿಯ ನಡುವಿನ ದಾರಿ ತಿಳಿಯದೇ, ಏನಾದರೂ ಮಾಡು ಉತ್ತಮವಾಗಿ ಅಂಕ ತೆಗೆದು ಹೆಚ್ಚು ಹಣ ಸಂಪಾದಿಸುವ ಕೆಲಸ ಮಾಡುವುದು. ತಮ್ಮ ಜೀವನದ ಗುರಿಯನ್ನಾಗಿ ಮಾಡಿಕೊಂಡು ಮಕ್ಕಳು ಮುಂದೆ ಸಾಗುವರು. ಇಂತಹ ಮಕ್ಕಳಿಗೆ ಅಜ್ಜ ಅಜ್ಜಿಯ ಪ್ರೀತಿ ಬೇಕಾಗಿಲ್ಲ, ಎತ್ತಿ ಆಡಿಸಿದ ಮನೆಮಂದಿಯ ಬಗ್ಗೆ ಕಲಿಕರವಿಲ್ಲ. ಏನಿದ್ದರು ಒಬ್ಬರನ್ನು ಹಿಂದೆ ಹಾಕಿ ಮುಂದೆ ಹೋಗುವುದು ಮಾತ್ರ ತಿಳಿದಿರುವುದು. ನನ್ನ ಆಸುಪಾಸಿನಲ್ಲಿ ನಮ್ಮ ಮನೆಯ ವಾತಾವರಣದಲ್ಲಿ ಹತ್ತಾರು ಮಕ್ಕಳನ್ನು ನಾನು ಕಳೆದ 15-20 ವರ್ಷದಿಂದ ನೋಡುತ್ತಾ ಇರುವೆನು. ವರ್ಷಗಳು ಕಳೆದಂತೆ ಈ ತರಹದ ವಿಷಕಾರಿ ವಾತಾವರಣ ಮಾತ್ರ ಹೆಚ್ಚಾಗುತ್ತಾ ಇರುವುದು. ಈ ಬಗ್ಗೆ ಗಂಭೀರವಾಗಿ ಯೋಚನೆ ಮಾಡಿ ಪರಿಹಾರ ಹುಡುಕುವ ಅಗತ್ಯವಿದೆ. ಇಲ್ಲವಾದರೇ ನಮ್ಮ ಮುಂದಿನ ದಿನಗಳಲ್ಲಿ ದ್ವೇಷ, ಅಸೂಯೆ, ಮೋಸ, ಯುದ್ದ, ಹಿಂಸೆ ಈ ಎಲ್ಲವುಗಳು ಜಗತ್ತಿನ ಎಲ್ಲಾ ಕಡೆಯಲ್ಲಿಯೂ ಮನೆ ಮನೆಗಳಲ್ಲಿಯೂ ಆವರಿಸುವುದು ಖಂಡಿತ.
ಪ್ರೀತಿ, ಪ್ರೇಮ ಶಾಂತಿಯ ಜಗತ್ತಿಗಾಗಿ, ನಮ್ಮ ಮನೆಗಾಗಿ, ಮಕ್ಕಳನ್ನು ಸಹಜವಾದ ವಾತಾವರಣದಲ್ಲಿ ಬೆಳಸಬೇಕಾಗಿದೆ. ಅದೇ ರೀತಿ ನಮ್ಮ ಸಂಪೂರ್ಣ ಶೈಕ್ಷಣಿಕ ವ್ಯವಸ್ಥೆಯನ್ನು ಬದಲಾವಣೆ ಮಾಡುವ ಅಗತ್ಯವಿದೆ. ಇದೇ ರೀತಿ ಶೈಕ್ಷಣಿಕ ವ್ಯವಸ್ಥೆ ಮುಂದುವರೆದರೆ ಬರುವ ಜಗತ್ತಿನಲ್ಲಿ ಮಕ್ಕಳು/ಜನರು ಗಳೆಂಬ ಯಂತ್ರಗಳು ಸಿಗುವುದು ವಿನಹ: ಭಾವನೆಗಳಿರುವ ಜೀವಿಗಳು ಸಿಗಲು ಸಾಧ್ಯವೇ ಇಲ್ಲ









1 comment:

  1. Good Blog !
    We are the leading Best Pest Control Services in Chennai,Madurai,Coimbatore,Trichy,Tenkasi and Bangalore..
    Call : 9941916916

    ReplyDelete